Monday, September 17, 2007

ಚೌತಿಯ ಸಂಭ್ರಮ

ಅಂದು ಶನಿವಾರ 15ನೇ ತಾರೀಖು.. ಬೆಳಿಗ್ಗೆ ಡೈರಿ ಗೆ ಹಾಲು ಕೊಡಲಿಕ್ಕಿಲ್ಲಾಂತ ತಡವಾಗಿ ಏಳೋ plan ಹಾಕಿ ಕೊಂಡಿದ್ದೆ. ಆದರೆ ಅಂದು ಗಣೇಶ ಚತುರ್ಥಿಯಾದ್ದರಿಂದ ಅಮ್ಮ ಬೇಗನೆ ಎಬ್ಸಿದ್ರು. ದೈನಂದಿನ ಕೆಲಸ ಎಲ್ಲಾ ಮುಗ್ಸಿ ಸ್ನಾನ ಮಾಡಿದ ನಂತರ ಚೌತಿಯ ತಯಾರಿ ಶುರುವಾಯ್ತು. ಮಂಟಪ ಕಟ್ಟೋದು, ಅದನ್ನು ಸಿಂಗರಿಸೋದು, light ಡೆಕೊರೇಶನ್ ಇತ್ಯಾದಿ ಇತ್ಯಾದಿ... ಇಷ್ಟಾದ್ರೂ ಗಣಪತಿ ಮಾತ್ರಾ ರಟ್ಟಿನ ಡಬ್ಬದಲ್ಲೇ ಮಲಗಿದ್ದ.. ಬೆಕ್ಕಿನ ಮರಿಯ ಹಾಗೆ. ಅವನನ್ನ ಎಬ್ಸಿ, ಮಂಟಪದಲ್ಲಿ ಕೂರ್ಸಿ, ಪೂಜೆ ಮಾಡಿ ಅವ್ನ ಹೆಸರಲ್ಲಿ ನೆಂಟರಿಷ್ಟರ ಜೊತೆ ಮೃಷ್ಟಾನ್ನ ಭೊಜಾನ ಮಾಡಿ ತೇಗಿದಾಗ ಮದ್ಯಾಹ್ನ 3 ಗಂಟೆ. ಸ್ವಲ್ಪ ಹೊತ್ತು ನಿದ್ದೆ ಮಾಡಿ ಎದ್ದಾಗ Srilanka Vs NewZealand ಮಧ್ಯೆ 20-20 match ನಡೀತಿತ್ತು. ಅದು ಮುಗಿಯೋ ಹೊತ್ತಿಗೆ ಸರಿಯಾಗಿ ಗಣೇಶಂಗೆ ವಿದಾಯ ಹೇಳೋ ಸಮಯಾನೂ ಸಮೀಪಿಸ್ತು. ಗಣಪತಿಗೆ ದಾರಿ ಮಧ್ಯೆ ತಿನ್ಲಿಕೆ ಅರಳು ಬೆಲ್ಲ parcel ready ಮಾಡೋ ಜವಾಬ್ದಾರಿ ನನ್ನ ಪಾಲಿಗೆ ಬಂತು. ಅಪ್ಪ ರಾತ್ರಿಯ ಪೂಜೆ ಮಾಡಿದಾಗ ನಾವು ಘಂಟೆ ಹೊಡೆಯುತ್ತಿದ್ದ ಹಾಗೆ ಹೊರಗೆ ಮಳೆರಾಯ ತಾನೂ ಶುರುಹಚ್ಕೊಂಡ. ನಾವು ಬಿಟ್ಟೇವಾ.. ಅಕ್ಷಯ್ ಕುಮಾರ್ ನ 'ತು ಚೀಸ್ ಬಡೀಹೈ ಮಸ್ಥ್ ಮಸ್ಥ್...' styleನಲ್ಲಿ ಬಟ್ಟೇನ ತಲೆಗೆ ಸುತ್ಕೊಂಡು ತೋಟದ ಬಾವಿ ಕಟ್ಟೆ ತನಕ ಮೆರವಣಿಗೆಯಲ್ಲಿ (4-5 ಜನ) ಘಂಟಾ ಘೋಷದೊಂದಿಗೆ ಹೊರಟೆವು. ಅಪ್ಪ ಗಣೇಶನಿಗೆ ಅಭಿಷೇಕ ಮಾಡಿ parcel ಕೈಯಲ್ಲಿಟ್ಟು 'ಗೋವಿಂದಾನ್ನಿ ಗೋವಿಂದಾ' ಅಂದಾಗ ನಾವೂ ಸಾಧ್ಯವಾದಷ್ಟು ಗಟ್ಟಿಯಾಗಿ ಧ್ವನಿ ಸೇರ್ಸಿದ್ವಿ. ಇದ್ದಕ್ಕಿದ್ದಂತೆ ಮಳೆರಾಯನಿಗೆ ಏನಾಯ್ತೋ ಏನೋ..ಜೋರಾಗಿ ಸುರಿಯಲಿಕ್ಕೆ ಪ್ರಾರಂಭಿಸಿದ. ಇವನು ಮಾಡಿದ ಉಪಕಾರ ಏನೆಂದರೆ ಚಂದ್ರನನ್ನ ನಮಗೆ ಕಾಣದ ಹಾಗೆ ತನ್ನ ಮರೆಯಲ್ಲಿ ಬಚಿಡ್ಕೊಂದದ್ದು. ಮದ್ಯಾಹ್ನ ಉಳಿದ ಭಕ್ಶ್ಯಗಳನ್ನು ಮುಗ್ಸಿ ಊಟ ಮಾಡಿ TV ಮುಂದೆ ಕೂತಾಗ.. South Africa-Bangla match ನಡೀತಿತ್ತು. ಪಾಪಿಗಳು...ಬೋ. ಮಕ್ಳು......ಯಾರ ಬಗ್ಗೆ ಹೇಳ್ತಾ ಇದ್ದೇನೆ ಅಂದ್ಕೊಂಡ್ರಿ? ಅದೇ cameramenಗಳು.. ಚಂದ್ರನನ್ನ ತೋರ್ಸೇ ಬಿಟ್ರು.. Live ಆಗಿ.. ಅದೂ 21 inch TVನಲ್ಲಿ Fit ಆಗೊವಷ್ತು zoom ಮಾಡ್ಕೊಂಡು. ಅವಕ್ಕೆ ಒಂದಷ್ಟು ಹಿಡಿ ಶಾಪ ಹಾಕಿ ನಿದ್ರೆಗೆ ಜಾರಿದಾಗ ಗಂಟೆ 12:45. ಬೆಳಿಗ್ಗೆ ಎದ್ದದ್ದು ಅಮ್ಮನ ಸುಪ್ರಭಾತ ದೊಂದಿಗೆ 8:00ಕ್ಕೆ.