Sunday, March 9, 2008

ಮಿತವ್ಯಯಿ

ಮನೇನಲ್ಲಿ ಎಲ್ಲರೂ ಹೇಳ್ತಾರೆ ನಾನು ಥೇಟ್ ನನ್ನ ಅಜ್ಜನ ತರಹ ಅಂತ. ಯಾವ ವಿಷಯ ದಲ್ಲಿ ಅಂದ್ಕೊಂಡ್ರಿ..? ಅದೇ ದುಡ್ಡಿನ ವಿಷಯ ದಲ್ಲಿ. ಅಜ್ಜ ಪೈಸೆ ಪೈಸೆಗೆ ಲೆಕ್ಕ ಹಾಕಿಡುತಿದ್ದರು. ಅಂದಿನ ಕಾಲವೇ ಹಾಗಿತ್ತು ಬಿಡಿ.. ನನಗೂ ಕೂಡ ದುಂದು ವೆಚ್ಚದಲ್ಲಿ ನಂಬಿಕೆ ಇಲ್ಲ. ಯಾರು ದುಡ್ಡನು ಖರ್ಚು ಮಾಡಲು ಸ್ವಲ್ಪ ಮೇಲೆ ಕೆಳಗೆ ನೋಡುತ್ತಾನೋ ಅವನಿಗೆ ’ಪಿಟ್ಟಾಸಿ’ ಅಂತಾರೆ. ಮನೇನಲ್ಲಿ ಈ ಬಿರುದು ನಂಗೆ ಸಿಕ್ಕಿದೆ. ಯಾಕೆ ಅಂತೀರಾ...ಕೆಳಗಿನ ಒಂದು ಉದಾಹರಣೆ ಓದಿ.

ಮನೆಗೆ ಸೋಪು, ಟೂಥ್-ಪೇಷ್ತು ನಂತಹ ಸಣ್ಣ ಪುಟ್ಟ ವಸ್ತುಗಳನ್ನು ತರೋದು ನನ್ನ ಕೆಲಸ. ಒಂದ್ಸಲ ಏನಾಯ್ತು ಅಂದ್ರೆ ಮೂರು ಸೋಪುಗಳನ್ನು ಅಂಗಡಿಯಿಂದ ತಂದೆ.. ಅದೂ 76% TFM ನದ್ದು. ಸೋಪ್ ನ ಪರಿಮಳ ನೋಡಿ ಅಣ್ಣ ಕೇಳಿದ "ಎಷ್ತು ಕೊಟ್ಟಿ..?". ನಾನಂದೆ 16 ರೂಪಾಯಿ. ಯಾವತ್ತೂ ಕಡಿಮೆ ಬೆಲೆಯ ಸಾಬೂನುಗಳನ್ನು ತರುತ್ತಿದ್ದ ನಾನು, 16 ರೂಪಾಯಿ ಅಂದಾಕ್ಶಣ ಅಣ್ಣನಿಗೆ ಆಶ್ಚರ್ಯವೋ ಆಶ್ಚರ್ಯ. ಕೇಳಿಯೇ ಬಿಟ್ಟ "ಏನೋ ಇಷ್ಟು ರೇಟಿದ್ದು ತಂದಿ..???". ನಾನೂ ಅಷ್ಟೇ ತಣ್ಣಗಾಗಿ ಹೇಳಿದೆ "3ಕ್ಕೆ ಒಟ್ಟಿದೆ 16 ರೂಪಾಯಿ".