Saturday, August 8, 2009

ನಮ್ಮೂರ ಮಳೆ

ಅಬ್ಬಬ್ಬಾ.. ಅದೇನು ಮಳೆ ಕಣ್ರೀ ನಮ್ಮೂರಲ್ಲಿ. ನಮ್ಮೂರಲ್ಲಿ ಮಾತ್ರ ಅಲ್ಲ, ಇಡೀ ಕರಾವಳಿಯಲ್ಲೂ ಈ ಸಲ ಮಳೆ ಶುರು ಆಗೋವಾಗ ತುಂಬಾ ತಡವಾದಿತ್ತು. ಜೂನ್ ತಿಂಗಳಲ್ಲಿ ಸೂರ್ಯ ಪಿಳಿ ಪಿಳಿ ಕಣ್ಣು ಬಿಟ್ಟದ್ದೇ ಬಂತು, ಮೋಡದ ಪತ್ತೆಯೇ ಇರಲಿಲ್ಲ. ಆದ್ರೆ ಒಮ್ಮೆ ಶುರು ಆದ್ಮೇಲೆ ತನ್ನ ಖೋಟಾ ಮುಗಿಸಿಯೆ ನಿಂತದ್ದು.
ದಿನ ಇಡೀ ಮಳೆ ಅಂದ್ರೆ ಮೆನೆಯಿಂದ ಹೊರಗೆ ಹೋಗೋದು ಕಷ್ಟ. ಕಿಟಕಿಯಿಂದ ಮಳೆ ಸುರಿಯೋದನ್ನು ನೋಡುವುದೇ ಒಂದು ಖುಷಿ.
ಈ ಸಲದ ನಮ್ಮೂರ ಮಳೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೆನೆದು ಶೀತ, ಜ್ವರ ಬಂದರೆ ನನ್ನನ್ನು ಬೈಯ್ಯಬೇಡಿ.

ಚಿತ್ರಣ 1
ಚಿತ್ರಣ 2
ಚಿತ್ರಣ 3

Sunday, May 31, 2009

ಒಂದು ಕಣ್ಣಿನ ಕಥೆ

ಹೌದು ನಾನು ಹೇಳ ಹೊರಟಿರುವುದು ಕಣ್ಣಿನ ಕಥೆ.. -3.5 power glass ನ ಹಿಂದೆ ಇದ್ದ ನನ್ನ ಬಲ ಕಣ್ಣಿನ ಕಥೆ.
ನಾನು ಕನ್ನಡಕದ ಒಳಗೆ ಮೊದಲ ಬಾರಿ ಬಂಧಿಯಾಗಿದ್ದು ಐದನೇ ತರಗತಿಯಲ್ಲಿ ಇರುವಾಗ.. ಅಂದರೆ ನನ್ನ 10 ನೇ ವರ್ಷದಲ್ಲಿ. ಅದಕ್ಕೆ ಮುಂಚಿನ ಕೆಲವು ಸಂಗತಿ ಹಂಚಿಕೊಳ್ಳುತ್ತಿದ್ದೇನೆ.
ಒಂದ್ಸಲ ಏನಾಯ್ತು ಅಂದ್ರೆ.. ೩ ನೆ ತರಗತಿಯ ಪರೀಕ್ಷೆಯ ಸಮಯ ದಲ್ಲಿ ನಮ್ಮ ಟೀಚರ್ ಕರಿಹಲಗೆ ಮೇಲೆ ಪ್ರಶ್ನೆಗಳನ್ನು ಬರೆಯುತ್ತಿದ್ದರು. ನಾನು ಹಿಂದೆ ಕೂತಿದ್ದರಿಂದ ನನಗೆ ಅದು ಕಾಣಿಸುತ್ತಿರಲಿಲ್ಲ. ನಾನು ಪಕ್ಕದವನನ್ನು ಕೇಳಿ ಬರೆದುಕೊಳ್ಳುತ್ತಿದ್ದೆ. ಆಗ ಟೀಚರ್ ಹತ್ರ ಬಂದು ನನ್ನ ಗೆಳೆಯನಿಗೆ ಚೆನ್ನಾಗಿ ಬೈದರು. ಯಾಕಂದ್ರೆ ಅವರು ಎಣಿಸಿದ್ದು ಆತ ನನ್ನ ಉತ್ತರವನ್ನು ನೋಡಿ ಬರೆಯುತ್ತಿದ್ದಾನೆ ಅಂತ !!! ಅವರಿಗೆ ಸಮಜಾಯಿಷಿ ಕೊಡಲು ಯಾರಿಗೂ ಧೈರ್ಯ ಇರಲಿಲ್ಲ. ಯಾಕಂದ್ರೆ ಅವರಿಗಿಂತ ಜಾಸ್ತಿ ಅವರ ಬೆತ್ತ ಮಾತಾಡುತ್ತಿದ್ದುದೆ ಇದಕ್ಕೆ ಕಾರಣ...!!!
೫ ನೇ ತರಗತಿಯಿಂದ ೭ ನೇ ತರಗತಿಯವರೆಗೆ ನನಗೆ ಪಾರ್ಟ್ ಟೈಮ್ ಕನ್ನಡಕ ಬಂತು.. ಬಲ ಕಣ್ಣಿಗಲ್ಲ, ಎಡ ಕಣ್ಣಿಗೆ. ಇದರ ಕಥೆ ಮುಂದಿನ ಬ್ಲಾಗ್ ನಲ್ಲಿಹೇಳುತ್ತೇನೆ.

Sunday, May 24, 2009

Indian Premier League - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇನ್ನು ಕೆಲವೇ ಕ್ಷಣಗಳಲ್ಲಿ Indian Premier League ನ ಕೊನೆಯ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಕ್ಕನ್ ಚಾರ್ಜರ್ ನಡುವೆ ಶುರುವಾಗಲಿಕ್ಕಿದೆ. ಒಂದು ಕಡೆ ದುಃಖ, ಇನ್ನೊಂದು ಕಡೆ ಸಂತೋಷ. ಬೇಜಾರು ಯಾಕಂದ್ರೆ ಇಷ್ಟು ದಿವಸದಿಂದ ನಡಿಯುತ್ತಿದ್ದ ಕ್ರಿಕೆಟ್ ಮೇಳ ಇಂದು ಮುಗಿಯುತ್ತಿದೆ .. ಖುಷಿ ಯಾಕಂದ್ರೆ ನಮ್ಮ ಬೆಂಗಳೂರು ಟೀಮ್ ಫೈನಲ್ ನಲ್ಲಿ ಆಡುತ್ತಿದೆ. ಏನಾದರೂ ಸರಿ, ಕುಂಬ್ಳೆ ಮತ್ತು ಅವರ ಟೀಮ್ ಜಯಿಸಲೆಂದು ಹಾರೈಸುತ್ತೇನೆ.

ಮೊದಲು ಕೆಲವು ಪಂದ್ಯಗಳ ನಂತರ ಕೆವಿನ್ ಪೀಟರ್ಸನ್ ಹಾಗು ರಾಹುಲ್ ದ್ರಾವಿಡ್ ಇಲ್ಲದೆ ಆಡುವುದನ್ನು ನೆನಸಿಕೊಂಡಾಗ "ಕಮಾನು ಡಾರ್ಲಿಂಗ್.. ಅಯ್ಯೋ ಅಯ್ಯೋ.. ಸಿಡೋನು ಡಾರ್ಲಿಂಗ್.. ಅಯ್ಯೋ ಅಯ್ಯೋ.. ಇನ್ನೇನು ಕೆಲಸ ನಂಗೂ ನಿಂಗೂ.. ಸಿಂಗು ಸಾಂಗು ಸಿಂಗು.. ಡೈಲಿ ಡಿಂಗು ಡಾಂಗು ಡಿಂಗು" ಅಂತ ಷಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಟೀಮ್ ಜೊತೆ duet ಹಾಡ್ತಾರೋ ಅಂದ್ಕೊಂಡಿದ್ದೆ. ಆದ್ರೆ ಆಮೇಲೆ ಆಡಿದ್ದೆ ನಿಜವಾದ ಆಟ. ನಿಜವಾಗಿ ನೋಡಿದರೆ ಕುಂಬ್ಳೆ ಸಾರಥ್ಯದಲ್ಲಿ ಎಂಟು ಪಂದ್ಯಗಳಲ್ಲಿ ಆರನ್ನು ಜಯಿಸಿ, ಅದರಲ್ಲೂ ಉಪಾಂತ್ಯಕ್ಕೆ ಬಂದ ಮೂರು ತಂಡಗಳನ್ನು ಸೋಲಿಸಿದ ಖ್ಯಾತಿ ನಮ್ಮ ಬೆಂಗಳೂರು ತಂಡಕ್ಕೆ ಸಲ್ಲುತ್ತದೆ.

ಕೊನೆಯ ಸಲದ ಏಳನೇ ಮತ್ತು ಎಂಟನೆ ಸ್ಥಾನ ಪಡಕೊಂಡ ತಂಡಗಳು ಈಸಲ ಅಂತಿಮ ಪಂದ್ಯಕ್ಕೆ ಸಜ್ಜಾಗಿವೆ ಅಂದ್ರೆ ನಂಬಲು ಯಾರಿಗಾದರು ಕಷ್ಟ ಆಗಬಹುದು. ಕ್ರಿಕೆಟ್ ಅಂದ್ರೆ ಹಾಗೇನೇ.. ಯಾರು ಆ ದಿನ ಚೆನ್ನಾಗಿ ಆಡುತ್ತಾರೋ ವಿಜಯದ ಮಾಲೆ ತೊಡಲು ಅವರು ಅರ್ಹರಾಗುತ್ತಾರೆ.

ಹಾಂ.. ಈಗ ಬಂದ ಸುದ್ದಿಯಂತೆ ಕುಂಬ್ಳೆ toss win ಆಗಿ ಮೊದಲು ಎಸೆತಗಾರಿಕೆಯನ್ನು ಆಯ್ದುಕೊಂಡಿದ್ದಾರೆ. ಪಂದ್ಯ ಶುರು ಆಗೋ ಒಳಗೆ ನನ್ನ ಹರಟೆ ಮುಗಿಸಿ, ಕುಂಬ್ಳೆ ಮತ್ತು ಅವರ ಟೀಮ್ ಗೆ support ಮಾಡಲು TV ಮುಂದೆ ಪ್ರತಿಷ್ಠಾಪನೆ ಆಗಬೇಕಿನ್ದಿದ್ದೇನೆ. ರಾಯಲ್ ಚಾಲೆಂಜರ್ಸ್ - All the Best..

Sunday, October 19, 2008

ಮರದಲ್ಲಿ ಕುಂಬಳಕಾಯಿ...!!!

ನೀವೆಲ್ಲಾ ಕೇಳಿರಬಹುದು ಪುನಿತ್ ರಾಜಕುಮಾರ್ ಹಾಡಿದ ಹಾಡು..

ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
...........................................
...........................................
ನೆಲ್ಲಿಕಾಯಿ ಮರದಲ್ಲಿಟ್ಟನು ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು.............’

ಜನ change ಕೇಳ್ತಾರೆ ಅಂತ ನಮ್ಮ ತೋಟದಲ್ಲಿ ಬೆಳೆದಿರೋ ಕುಂಬಳಕಾಯಿ ಮರದ್ಮೆಲೇನೆ ಬೆಳೆದ್ಬಿಟ್ಟಿದೆ. ಇಂಗಾದ್ರೆ ಎಂಗೆ ಶಿವಾ...???



Sunday, September 14, 2008

ಹೋಂ ಮೇಡ್ ಹಪ್ಪಳ

ಕೆಳಗಿನೆ ಛಾಯಾ ಚಿತ್ರ ಗಳನ್ನು ನೋಡಿ ನೀವು ಅಂದ್ಕೊಳ್ಬಹುದು.. ಈತ ಈಗ ಯಾವ ಕಾಲದಲ್ಲಿ ಇದನ್ನು post ಮಾಡಿದ್ದಾನೆ ಎಂದು. ಏನು ಮಾಡುವುದು ಸ್ವಾಮಿ.. ತಿನ್ನೊವಾಗ ನೆನೆಪು ಬಂತು. ಹಾಗೇ ಬೇಸಿಗೆ ಕಾಲದಲ್ಲಿ ತೆಗೆದ ಚಿತ್ರಗಳು camera flash card ಒಳಗೆ ಬೆಚ್ಚಗೆ ಕೂತಿದ್ದವು.. ಹಪ್ಪಳ ಡಬ್ಬದಲ್ಲಿ ಇದ್ದಹಾಗೆ.


ಇಂದಿನ ಕಾಲದಲ್ಲಿ, ಕೈ ತುಂಬಾ ಹಣ ಇರುವಾಗ, ready made ಹಪ್ಪಳ, ಬೇಕರಿ ತಿಂಡಿಗಳು ಸಿಗುವಾಗ, ಹಪ್ಪಳ ಮಾಡೋ ಮಂಡೆ ಬಿಸಿ ಯಾರಿಗೆ ಬೇಕು? ನೀವು ಏನೇ ಹೇಳಿ.. ಹಪ್ಪಳದ ನಿಜವಾದ ರುಚಿ ಇರುವುದು ತಿನ್ನುವುದರಲ್ಲಿ ಅಲ್ಲ.. ಅದನ್ನು ಮಾಡುವುದರಲ್ಲಿ. ಮನೆಯ ಎಲ್ಲಾ ಸದಸ್ಯರು ಒಟ್ಟಾಗಿ ಕುಳಿತು ಮಾಡುವ ತಯಾರಿಗಳು, ತೇಲಿಬರುವ ತಮಾಶೆ ಮಾತುಗಳು; ಎಲ್ಲದರಲ್ಲೂ ಒಂಥರಾ ಮಜಾ ಇರತ್ತೆ.

ನಮ್ಮ ಮನೇನಲ್ಲಿ ವರ್ಷದ ಹಪ್ಪಳದ ವಿಷೇಶ ಏನೆಂದರೆ.. ಅದರ ಮೂಲ ವಸ್ತು ಗೆಣಸು ನಮ್ಮ ಗದ್ದೆಯಲ್ಲೇ ಬೆಳೆಸಿದ್ದು. ಅಂದರೆ purely Home Made ಹಪ್ಪಳ!!!


ಇಷ್ಟೆಲ್ಲಾ ಕೇಳಿ ನಿಮಗೆ ಹಪ್ಪಳ ತಿನ್ನೋ ಮನಸ್ಸಾಗಿದ್ರೆ.. ನನ್ನ ಚಾವಡಿಗೆ ಭೇಟಿ ಕೊಟ್ಟದ್ದಕ್ಕೂ, ನಾನು ಅಂಕಣವನ್ನು ಬರೆದಕ್ಕೂ ಸಾರ್ಥಕವಾಗುತ್ತೆ.









Wednesday, August 27, 2008

Manual Feeding

ಸಣ್ಣ ಮರಿ ಇರೋವಾಗ ಬಾಟಲ್ ಹಾಲು ಕುಡಿಸಲಿಕ್ಕೆ ಶುರು ಮಾಡಿದ್ದು ದೊಡ್ಡದಾದ ಮೇಲೂ ಅಭ್ಯಾಸ ಬಿಟ್ಟಿಲ್ಲ. ನೀವೇ ನೋಡಿ..


Monday, April 14, 2008

ಬಾನಲ್ಲಿ ಓಡೋ ಮೇಘ.. ಗಿರಿಗೋ ನಿಂತಲ್ಲೆ ಯೋಗ...