Sunday, May 24, 2009

Indian Premier League - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇನ್ನು ಕೆಲವೇ ಕ್ಷಣಗಳಲ್ಲಿ Indian Premier League ನ ಕೊನೆಯ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಕ್ಕನ್ ಚಾರ್ಜರ್ ನಡುವೆ ಶುರುವಾಗಲಿಕ್ಕಿದೆ. ಒಂದು ಕಡೆ ದುಃಖ, ಇನ್ನೊಂದು ಕಡೆ ಸಂತೋಷ. ಬೇಜಾರು ಯಾಕಂದ್ರೆ ಇಷ್ಟು ದಿವಸದಿಂದ ನಡಿಯುತ್ತಿದ್ದ ಕ್ರಿಕೆಟ್ ಮೇಳ ಇಂದು ಮುಗಿಯುತ್ತಿದೆ .. ಖುಷಿ ಯಾಕಂದ್ರೆ ನಮ್ಮ ಬೆಂಗಳೂರು ಟೀಮ್ ಫೈನಲ್ ನಲ್ಲಿ ಆಡುತ್ತಿದೆ. ಏನಾದರೂ ಸರಿ, ಕುಂಬ್ಳೆ ಮತ್ತು ಅವರ ಟೀಮ್ ಜಯಿಸಲೆಂದು ಹಾರೈಸುತ್ತೇನೆ.

ಮೊದಲು ಕೆಲವು ಪಂದ್ಯಗಳ ನಂತರ ಕೆವಿನ್ ಪೀಟರ್ಸನ್ ಹಾಗು ರಾಹುಲ್ ದ್ರಾವಿಡ್ ಇಲ್ಲದೆ ಆಡುವುದನ್ನು ನೆನಸಿಕೊಂಡಾಗ "ಕಮಾನು ಡಾರ್ಲಿಂಗ್.. ಅಯ್ಯೋ ಅಯ್ಯೋ.. ಸಿಡೋನು ಡಾರ್ಲಿಂಗ್.. ಅಯ್ಯೋ ಅಯ್ಯೋ.. ಇನ್ನೇನು ಕೆಲಸ ನಂಗೂ ನಿಂಗೂ.. ಸಿಂಗು ಸಾಂಗು ಸಿಂಗು.. ಡೈಲಿ ಡಿಂಗು ಡಾಂಗು ಡಿಂಗು" ಅಂತ ಷಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಟೀಮ್ ಜೊತೆ duet ಹಾಡ್ತಾರೋ ಅಂದ್ಕೊಂಡಿದ್ದೆ. ಆದ್ರೆ ಆಮೇಲೆ ಆಡಿದ್ದೆ ನಿಜವಾದ ಆಟ. ನಿಜವಾಗಿ ನೋಡಿದರೆ ಕುಂಬ್ಳೆ ಸಾರಥ್ಯದಲ್ಲಿ ಎಂಟು ಪಂದ್ಯಗಳಲ್ಲಿ ಆರನ್ನು ಜಯಿಸಿ, ಅದರಲ್ಲೂ ಉಪಾಂತ್ಯಕ್ಕೆ ಬಂದ ಮೂರು ತಂಡಗಳನ್ನು ಸೋಲಿಸಿದ ಖ್ಯಾತಿ ನಮ್ಮ ಬೆಂಗಳೂರು ತಂಡಕ್ಕೆ ಸಲ್ಲುತ್ತದೆ.

ಕೊನೆಯ ಸಲದ ಏಳನೇ ಮತ್ತು ಎಂಟನೆ ಸ್ಥಾನ ಪಡಕೊಂಡ ತಂಡಗಳು ಈಸಲ ಅಂತಿಮ ಪಂದ್ಯಕ್ಕೆ ಸಜ್ಜಾಗಿವೆ ಅಂದ್ರೆ ನಂಬಲು ಯಾರಿಗಾದರು ಕಷ್ಟ ಆಗಬಹುದು. ಕ್ರಿಕೆಟ್ ಅಂದ್ರೆ ಹಾಗೇನೇ.. ಯಾರು ಆ ದಿನ ಚೆನ್ನಾಗಿ ಆಡುತ್ತಾರೋ ವಿಜಯದ ಮಾಲೆ ತೊಡಲು ಅವರು ಅರ್ಹರಾಗುತ್ತಾರೆ.

ಹಾಂ.. ಈಗ ಬಂದ ಸುದ್ದಿಯಂತೆ ಕುಂಬ್ಳೆ toss win ಆಗಿ ಮೊದಲು ಎಸೆತಗಾರಿಕೆಯನ್ನು ಆಯ್ದುಕೊಂಡಿದ್ದಾರೆ. ಪಂದ್ಯ ಶುರು ಆಗೋ ಒಳಗೆ ನನ್ನ ಹರಟೆ ಮುಗಿಸಿ, ಕುಂಬ್ಳೆ ಮತ್ತು ಅವರ ಟೀಮ್ ಗೆ support ಮಾಡಲು TV ಮುಂದೆ ಪ್ರತಿಷ್ಠಾಪನೆ ಆಗಬೇಕಿನ್ದಿದ್ದೇನೆ. ರಾಯಲ್ ಚಾಲೆಂಜರ್ಸ್ - All the Best..

0 comments: