Sunday, May 31, 2009

ಒಂದು ಕಣ್ಣಿನ ಕಥೆ

ಹೌದು ನಾನು ಹೇಳ ಹೊರಟಿರುವುದು ಕಣ್ಣಿನ ಕಥೆ.. -3.5 power glass ನ ಹಿಂದೆ ಇದ್ದ ನನ್ನ ಬಲ ಕಣ್ಣಿನ ಕಥೆ.
ನಾನು ಕನ್ನಡಕದ ಒಳಗೆ ಮೊದಲ ಬಾರಿ ಬಂಧಿಯಾಗಿದ್ದು ಐದನೇ ತರಗತಿಯಲ್ಲಿ ಇರುವಾಗ.. ಅಂದರೆ ನನ್ನ 10 ನೇ ವರ್ಷದಲ್ಲಿ. ಅದಕ್ಕೆ ಮುಂಚಿನ ಕೆಲವು ಸಂಗತಿ ಹಂಚಿಕೊಳ್ಳುತ್ತಿದ್ದೇನೆ.
ಒಂದ್ಸಲ ಏನಾಯ್ತು ಅಂದ್ರೆ.. ೩ ನೆ ತರಗತಿಯ ಪರೀಕ್ಷೆಯ ಸಮಯ ದಲ್ಲಿ ನಮ್ಮ ಟೀಚರ್ ಕರಿಹಲಗೆ ಮೇಲೆ ಪ್ರಶ್ನೆಗಳನ್ನು ಬರೆಯುತ್ತಿದ್ದರು. ನಾನು ಹಿಂದೆ ಕೂತಿದ್ದರಿಂದ ನನಗೆ ಅದು ಕಾಣಿಸುತ್ತಿರಲಿಲ್ಲ. ನಾನು ಪಕ್ಕದವನನ್ನು ಕೇಳಿ ಬರೆದುಕೊಳ್ಳುತ್ತಿದ್ದೆ. ಆಗ ಟೀಚರ್ ಹತ್ರ ಬಂದು ನನ್ನ ಗೆಳೆಯನಿಗೆ ಚೆನ್ನಾಗಿ ಬೈದರು. ಯಾಕಂದ್ರೆ ಅವರು ಎಣಿಸಿದ್ದು ಆತ ನನ್ನ ಉತ್ತರವನ್ನು ನೋಡಿ ಬರೆಯುತ್ತಿದ್ದಾನೆ ಅಂತ !!! ಅವರಿಗೆ ಸಮಜಾಯಿಷಿ ಕೊಡಲು ಯಾರಿಗೂ ಧೈರ್ಯ ಇರಲಿಲ್ಲ. ಯಾಕಂದ್ರೆ ಅವರಿಗಿಂತ ಜಾಸ್ತಿ ಅವರ ಬೆತ್ತ ಮಾತಾಡುತ್ತಿದ್ದುದೆ ಇದಕ್ಕೆ ಕಾರಣ...!!!
೫ ನೇ ತರಗತಿಯಿಂದ ೭ ನೇ ತರಗತಿಯವರೆಗೆ ನನಗೆ ಪಾರ್ಟ್ ಟೈಮ್ ಕನ್ನಡಕ ಬಂತು.. ಬಲ ಕಣ್ಣಿಗಲ್ಲ, ಎಡ ಕಣ್ಣಿಗೆ. ಇದರ ಕಥೆ ಮುಂದಿನ ಬ್ಲಾಗ್ ನಲ್ಲಿಹೇಳುತ್ತೇನೆ.

1 comments:

Aparna said...

Yavagri heltheeri innondu kannina kathena?